Friday, November 13, 2009

ಮರಕೋತಿ ಪ್ರಣಯ ಪ್ರಸಂಗ.. ಭಾಗ ೧


ನನ್ನೊಬ್ಬ ಗೆಳೆಯ ಇದ್ದಾನೆ..

ಯಾವುದೋ ಕೆಟ್ಟಕಾಲದಲ್ಲಿ ಜಗತ್ತಿನ ಎಲ್ಲ ಗ್ರಹಗಳು ಅವನ ಕಡೆ ತಮ್ಮ ವಕ್ರ ಪಕ್ರದ್ರಿಷ್ಟಿ ಹಾಕಿದ್ದಾಗ ..

..ಹೈದನಿಗೆ "LOVE" ಆಯಿತು..

ನಂಗೆ ಬಂದ್ ಹೇಳೇ ಬಿಟ್ಟ..

"ಲೇಯ್.. ಚಡ್ಡಿ ಹಾಕೋಕೆ ಮೊನ್ನೆ ಅಷ್ಟೆ ನಾನೇ ಕಲಿಸಿದ್ದು.. ಅಷ್ಟರಲ್ಲೇ "Lovva" " ಅಂದೆ.

ಆರಡಿ ಹುಡುಗ ಮೂರಡಿ ಆಗಿ ನಾಚ್ಕೊಂಡ್ ಬಿಡೋದ!!?

"ಅಬ್ಭಾ ಅಬ್ಭಾ ಏನ್ ನಾಚಿಕೆ? ಏನ್ ನಾಚಿಕೆ ಅಂತೀರಿ?

(ಊರಲ್ಲಿ ಚಡ್ಡಿಯಲ್ಲಿ ತಿರುಗೋವಗ್ಲೂ ನನ್ ಮಗನ ಮುಖದಲ್ಲಿ "ಫೀಲ್" ಇರಲ್ಲಿಲ್ಲ!!)

"ಸರಿಯಪ್ಪ ನನ್ ಮಗನೆ .. ಜಗದ್ಗುರು ಅಗೋ ಟೈಮ್ ಬಂದಿದೆ " ಅಂದೆ..

ಹೇಗಪ್ಪ? ಕೇಳ್ದ..

"ನೋಡೋ.. ಈ ಲವ್ವು ಎಂತಹ ಮರ ಕೋತಿ ಯನ್ನೂ ಮಹಾತ್ಮಾ ಮಾಡಿ ಬಿಡುತ್ತೆ ..

ಈಗ ಲವ್ವು ಮಾಡಿದಿ ಅನ್ನು..

೨೪ ಘಂಟೆ ಅವಳು ಅನ್ನೋ "Virtual" ಭೂತ ಜೊತೆ ಮನಸಲ್ಲಿ..

ಮೊಬೈಲ್ ಅಲ್ಲಿ..

ಮಾತು.. ಕಥೆ..

ಅರ್ಥವಿಲ್ಲ.. ಗುರಿ ಇಲ್ಲ.. ಗೊತ್ತಿಲ್ಲ..

ಅವಳು ಹೇಳ್ತಾಳೆ..

"ಕೋತಿ"..

ನೀನು ಹೇಳ್ತಿ..

"ಕತ್ತೆ"..

ಅವಳು ಕೇಳ್ತಾಳೆ..

"ಊಟ ಆಯ್ತಾ?"

ನೀನು ಹೇಳ್ತಿ..

"ನಂದು ಆಯಿತು .. ನಿಂದ ಆಯ್ತಾ?"..

ಅವಳು ಹೇಳ್ತಾಳೆ..

"ನಂದು ಆಯಿತು"..

ನೀನ್ ನಾರ್ಮಲ್ ಆಗಿದ್ರೆ ಅಲ್ಲೇ ನಿಲ್ಲಿಸ್ತಿ.. ಆದ್ರೆ ಲವ್ವಲ್ಲಿ ಯಾರಪ್ಪ ನಾರ್ಮಲ್ ಇರ್ತಾರೆ?

"ನಿನ್ನೆ ಊಟ ಮಾಡಿದ್ಯ?" ಕೇಳ್ತಿ..

ಇಡೀ ರಾತ್ರಿ ನಿಮ್ಮದು ಇದೇ "infinite" ಲೂಪು "continue" ಆಗ್ತಾ ಇರುತ್ತೆ..

"CUG" ತಾನೆ?

"ಚಾರ್ಜ್ ಮುಗಿದರೂ ಮೊಬೈಲ್ ಅನ್ನ ಆಕಡೆ ಕರೆಂಟ್ ಗೆ ಹಾಕಿ ಮತ್ತೆ ಮಾತಾಡ್ತೀರಿ.."

ಯಾಕೋ ಸಾಕು.. ನಿದ್ರೆ ಮಾಡೋಣ ಅಂತ ನಿಂಗೆ ಹೇಳ್ಬೇಕು ಅನ್ಸುತ್ತೆ..

ಅವಳಿಗೂ ಹಾಗೇ ಅನ್ನಿಸ್ತ ಇರುತ್ತೆ..

ಇಬ್ಬರೂ ಹೇಳೋಲ್ಲ..

"CONTINUE" ಮಾಡ್ತೀರಿ..

ಸಾಕು..

ಇನ್ನು ತಲೆ ಕೆಟ್ಟು ಕೆರ ಹಿಡಿಯುತ್ತೆ ಅನ್ನೋವಾಗ ಫೋನ್ ಕೆಳಗಿಡ್ತೀರಿ..

ಮರುದಿನ ಬೆಳಿಗ್ಗೆ ಪುನಃ ಫೋನ್ ಮಾಡ್ತಿ..

"ತಿಂಡಿ ಆಯ್ತಾ ?" ಕೇಳ್ತಿ..

"ಆಯಿತು.. ನಿಂದು ಆಯ್ತಾ" ಅಂತ ಅವಳು ..

"ಆಯಿತು.. ಏನ್ ತಿಂದೆ" ಅಂತ ನೀನು..

"ನೀನು ಹೇಳು ಏನ್ ತಿಂದೆ ಅಂತ ಅವ್ಳು.." (ಬಸ್ ಬರೋಕೆ ಇನ್ನೊ ೧೦ ನಿಮಿಷ ಇದ್ಯಲ್ಲ.. ಟೈಮ್ ಪಾಸು ಮಾಡೋಕೆ ಒಳ್ಳೆ ಬಕ್ರ ಸಿಕ್ಕಿದಾಗ.. !!:) )

"ನೀನು ಏನ್ ತಿಂದೆ ಅಂತ ಹೇಳು " ಅಂತ ನೀನು..

ಇದೆ "continue"..

"Finalli" ನೀನು ರಾಗಿಮುದ್ದೆ ತಿನ್ದಿರ್ತಿ..

ಅವಳು ಇಡ್ಲಿ ತಿನ್ದಿರ್ತಾಳೆ ಅಷ್ಟೆ..

ಇಬ್ಬರಿಗೂ ಗೊತ್ತಿದೆ..

ಸುಮ್ಮನೆ ರೀಲು ಬಿಡ್ತಾ ಇರ್ತೀರಿ..

ನೀನು ಅಲ್ಲಿರ್ತಿ..

ಅವಳು ಇಲ್ಲಿ..

ಸಂಜೆ ವರ್ಗೂ "HUTCH" ನಾಯಿ ನಿಮ್ಮ ಮೆಸೇಜ್ ಅನ್ನ ಅಲ್ಲಿಂದ ಇಲ್ಲಿ.. ಇಲ್ಲಿಂದ ಅಲ್ಲಿ ಕಳಿಸ್ತಾ ಇರುತ್ತೆ.. (ಪಾಪ.. ಜೀವ ಇದ್ದಿದ್ರೆ ನಿಮಗೆ ಎಷ್ಟು ಶಾಪ ಕೊಡ್ತಾ ಇತ್ತೋ!!)

ಪುನಃ ಸಂಜೆ ಆಗುತ್ತೆ ..

ಪುನಃ ರಾತ್ರಿ ಆಗುತ್ತೆ..

ಅವಳು ಸ್ವಲ್ಪ ಮೂಲೆಗೆ ಬರ್ತಾಳೆ..

ನೀನು ನಿನ್ ಮನೆ ಮಹಡಿ ಮೇಲೆ ಹೋಗ್ತಿ..

ಅವಳು ಹೇಳ್ತಾಳೆ..
"ಕೋತಿ"..
ನೀನು ಹೇಳ್ತಿ..
"ಕತ್ತೆ"..
ಅವಳು ಕೇಳ್ತಾಳೆ..
"ಊಟ ಆಯ್ತಾ?"
ನೀನು ಹೇಳ್ತಿ..
"ನಂದು ಆಯಿತು .. ನಿಂದ ಆಯ್ತಾ?"..
ಅವಳು ಹೇಳ್ತಾಳೆ..
"ನಂದು ಆಯಿತು"..

"INFINITE" ಲೂಪು once again ಶುರು ಆಗುತ್ತೆ..

ನಿಂಗೆ ನಿದ್ರೆ ಇಲ್ಲ..

ಕಣ್ಣು ಕೆಂಪು ಆಗಿರುತ್ತೆ..

ಊಟ ಸೇರೋಲ್ಲ..

ಅವಳು ಹತ್ತಿರ ಇರೋವಾಗ ಫ್ರೆಂಡ್ಸ್ ದೂರ ಇರ್ಲಿ ಅಂತ ನೋಡ್ತಿ..

ಯಾರೂ ಬೇಡ..


ಸುಖವಾಗಿ ಊರಲ್ಲಿ ಇರೋ ಬಾರೋ ಹಕ್ಕಿ ಗಳನ್ನೆಲ್ಲ ಆರಾಮಾಗಿ ನೋಡ್ತಿದ್ದ ಹುಡುಗ..

ಮೂಗಿಗೆ ದಾರ ಹಾಕಿದ ಹೋರಿ ಅಂತೆ ಆಗಿ ಬಿಡ್ತಿ..


ಸರಿಯಪ್ಪ.. ಜಗದ್ಗುರು ಅಗೋ ಫಸ್ಟ್ ಸ್ಟೆಪ್ ಪಾಸ್ ಮಾಡ್ದೆ ಕಣೋ."


To be continued....:)
Friday, October 30, 2009

ಮಂಗಾಟ ಶುರುವಾಯ್ತು ನೋಡಿ..


ನಮಸ್ಕಾರ..
ಯಾಕೋ ಇವತ್ತು ಒಳ್ಳೆ ಮೂಡಲ್ಲಿ ಇದ್ನೋ ಅಲ್ಲ ಖರಾಬ್ ಮೂಡ್ನಲ್ಲಿ ಇದ್ನೋ ಗೊತ್ತಿಲ್ಲ!!
ರೀತಿ ಒಂದು ಮಂಗಾಟ ಆಡಿಯೇ ಬಿಡೋಣ ಅಂತ dಸೈಡು ಮಾಡ್ಕೊಂಡು ಬಿಟ್ಟೆ!!
ಜಗತ್ತನ್ನ ಸೀರಿಯಸ್ ಆಗಿ ನೋಡೋವ್ರು ತುಂಬ ಅದ್ರ್ರು ಕಣ್ರೀ..
ಬನ್ನಿ.. ಇದೇ ಮೂರ್ ದಿನ ಇದ್ದ ಹೋಗೋ ಜಗತ್ತನ್ನೋ ಪ್ಲೇ ಗ್ರೌಂಡ್ ಅನ್ನ ಬೇರೆ angle ಅಲ್ಲಿ ನೋಡೋಕೆ ಕಲಿಯೋಣ!!
Atleast ಟ್ರೈ ಮಾಡೋಣ!! ಏನಂತೀರಿ!!
ನೋಡೋಣ.. ಎಷ್ಟ್ ದಿನ ಅಂತ ಮಂಗಾಟ ಅಡ್ತೇನೋ ನೋಡೇ ಬಿಡೋಣ...
ಮನಸ್ ಬಂದಾಗ ಮನಸ್ ಗೆ ಬಂದದ್ದನ್ನ ಗೀಚಿ ಇಲ್ಲಿ ಹಾಕ್ತೇನೆ..
ನಿಮ್ ಮೂಡ್ ಸರಿ ಇರೋವಗಲೋ.. ಹಾಳಾಗಿ ಕೆಟ್ ಕೆರ ಹಿಡ್ದ್ ಹೋಗಿರೋವಾಗ್ಲೋ..
ಯಾವಾಗ್ಲಾದ್ರೂ ಒಮ್ಮೆ...
ಮಂಗಾಟ ಕ್ಕೆ ಬನ್ನಿ..
ಓದಿ.. ನಗಿ..
ಕ್ಲೋಸ್ ಮಾಡಿ.. ಆರಾಮಾಗಿ ಹೋಗಿ..
ಅಷ್ಟೇರೀ.. ಮತ್ತೇನಿಲ್ಲ!!
ಹೊರಡ್ತೇನೆ .. ಹೊತ್ತಾಯ್ತು.!!

ಇವತ್ತು ನಿಮ್ಮ ಭವಿಷ್ಯ ನೋಡಿದ್ರ!!!??


ನಿಮಗೆ ಬೆಳಿಗ್ಗೆ ನ್ಯೂಸ್ ಪೇಪರ್ ಓದೋ ಅಭ್ಯಾಸ ಇದೆಯೇನ್ರೀ??
ನಂಗೆ ಅಂತಹ ಒಳ್ಳೆ ಅಭ್ಯಾಸ ಇರ್ಲಿಲ್ಲ ಕಣ್ರೀ..
ಆದ್ರೆ ಮೊನ್ನೆ ಮೊನ್ನೆ ಕಾಂಕ್ರೀಟ್ ಗೋಡೆಗಳ ನಡುವಲ್ಲಿ ಈ ಬುದ್ದು ಗೆ ಜ್ಞಾನೋದಯ ವಾಯ್ತು...
ನಾನ್ ಏನ್ ಮಾಡ್ದೆ ಅಂದ್ರೆ ವಿಜಯ ಕರ್ನಾಟಕ, ಉದಯ ವಾಣಿ ಎರಡೂ ಪೇಪರ್ ಹಿಡ್ಕೊಂಡ್ ನಾನ್ ಭವಿಷ್ಯ compare ಮಾಡ್ದೆ..
ಅಹ ಏನ್ ಮಜಾ ಅಂತೀರಿ!!ಒಂದರ
summary ಹೀಗಿತ್ತು..
"ಕಲ್ಯಾಣ ಕೂಡಿ ಬರಲಿದೆ..."
ದೂರ ಪ್ರಯಾಣ ಯೋಗ...
ಶತ್ರು ಭಾದೆ!!"

ಈಗ ಇನ್ನೊಂದರ summary ಕೇಳಿ..
"ಪತಿ ಪತ್ನಿ ಯಲ್ಲಿ ವಿರಸ!! (ಅಲ್ರೀ ಈಗಷ್ಟೇ ಮದ್ವೆ ಯಾಗಿ.. ಈಗಲೇ ಹೀಗೆ!! ಅಯ್ಯೋ ಶಿವನೆ!!)
ದೂರದ ಊರಿಗೆ ಎತ್ತಂಗಡಿ !!(ದೂರ ಪ್ರಯಾಣ ಯೋಗ !!).
ನೆಂಟರ ಆಗಮನ( ಕರೆಕ್ಟ್ ಆಗಿದೆ!! ಶತ್ರು ಭಾದೆ ಅಂದ್ರೆ ಇದೇ ಇರ್ಬೇಕು!!)"
ಹ್ಹ.. ಹ್ಹ.. ಹ್ಹ..!!

ವಾಹ್!! ಸೂಪರ್ಬ್.. ಅಲ್ರೀ!! ಬೆಳಿಗ್ಗೆ ಎದ್ದು ಇದಕ್ಕಿಂತ ಒಳ್ಳೆ ಜೋಕ್ ಓದೋಕೆ ಸಿಗುತ್ತಾ ನೀವೇ ಹೇಳಿ..
ಹ್ಹ.. ಹ್ಹ.. ಹ್ಹ..
ದಿನಾಲೂ ಈಗ ನಾನು ಇದನ್ನೇ ಮಾಡ್ತಾ ಇದ್ದೇನೆ!!
ಭವಿಷ್ಯ ಸುಳ್ಳೋ ಸತ್ಯಾನೋ ಸುಳ್ಳೋ ಅಂತ nange ಗೊತ್ತಿಲ್ಲಪ್ಪ..
ಆದ್ರೆ ಒಂದ್ ಮಾತ್ರ sure!!
ನನ್ನ ಈ comparision ನಂಗೆ ಫುಲ್ ಖುಷಿ ಕೊಡ್ತಿದೆ!!
ಬೇಕಿದ್ರೆ ನೀವೇ ಟ್ರೈ ಮಡಿ ನೋಡಿ ಸಾರ್!!